Index   ವಚನ - 473    Search  
 
ಸಾದಾಖ್ಯ ಉತ್ಪತ್ಯ ಇನ್ನೊಂದು ಪ್ರಕಾರವದೆಂತೆಂದಡೆ: ಆ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ ಮಹಾಸಾದಾಖ್ಯ ಉತ್ಪತ್ಯವಾಯಿತ್ತು, ಆ ಪ್ರಣವದ ದರ್ಪಣಾಕಾರದಲ್ಲಿ ಶಿವಸಾದಾಖ್ಯ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಅಮೂರ್ತಿಸಾದಾಖ್ಯ ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಮೂರ್ತಿಸಾದಾಖ್ಯ ಉತ್ಪತ್ಯವಾಯಿತ್ತು. ಆ ಪ್ರಣಮದ ದಂಡಸ್ವರೂಪದಲ್ಲಿ ಕರ್ತೃಸಾದಾಖ್ಯ ಉತ್ಪತ್ಯವಾಯಿತ್ತು. ಆ ಪ್ರಣಮದ ತಾರಕಸ್ವರೂಪದಲ್ಲಿ ಕರ್ಮಸಾದಾಖ್ಯ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಅತಿಮಹಾಗಮೇ: ಓಂಕಾರ ಜ್ಯೋತಿರೂಪೇ ಚ ಮಹಾಸಾದಾಖ್ಯಮುದ್ಭವಂ | ಓಂಕಾರ ದರ್ಪಣಾಕಾರೇ ಶಿವಸಾದಾಖ್ಯಮುದ್ಭವಂ || ಓಂಕಾರಮರ್ಧಚಂದ್ರೇ ಚ ಅಮೂರ್ತಂ ನಾಮ ಜಾಯತೇ | ಓಂಕಾರಕುಂಡಲಾಕಾರೇ ಮೂರ್ತಸಾದಾಖ್ಯಮುದ್ಭವಂ || ಕರ್ತೃಕಂ ನಾಮಸಾದಾಖ್ಯಂ ದಂಡರೂಪೇ ಸಮುದ್ಭವಾಃ | ಕರ್ಮಸಾದಾಖ್ಯಕಂ ಚೈವ ತಾರಕೇ ಚ ಸಮುದ್ಭವಂ | ಸಾದಾಖ್ಯಂ ಷಡ್ವಿಧಂ ದೇವಿ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.