ಇನ್ನು ನವಶಕ್ತಿಗಳ ನೆಲೆ ಅದೆಂತೆಂದಡೆ:
ಆಧಾರಚಕ್ರದಲ್ಲಿ ಕಾಕಿನಿಶಕ್ತಿ ಇಹಳು.
ಸ್ವಾಧಿಷ್ಠಾನಚಕ್ರದಲ್ಲಿ ರಾಕಿನಿಶಕ್ತಿ ಇಹಳು.
ಮಣಿಪೂರಕಚಕ್ರದಲ್ಲಿ ಲಾಕಿನಿಶಕ್ತಿ ಇಹಳು.
ಅನಾಹತಚಕ್ರದಲ್ಲಿ ಶಾಕಿನಿಶಕ್ತಿ ಇಹಳು.
ವಿಶುದ್ಧಿಚಕ್ರದಲ್ಲಿ ಡಾಕಿನಿಶಕ್ತಿ ಇಹಳು.
ಆಜ್ಞಾಚಕ್ರದಲ್ಲಿ ಹಾಕಿನಿಶಕ್ತಿ ಇಹಳು.
ಬ್ರಹ್ಮಚಕ್ರದಲ್ಲಿ ನಿರ್ಮಾಯಶಕ್ತಿ ಇಹಳು.
ಶಿಖಾಚಕ್ರದಲ್ಲಿ ನಿಭ್ರಾಂತಶಕ್ತಿ ಇಹಳು.
ಪಶ್ಚಿಮಚಕ್ರದಲ್ಲಿ ನಿರ್ಭಿನ್ನಶಕ್ತಿ ಇಹಳು ನೋಡಾ.
ಇದಕ್ಕೆ ನಿರಾಮಯಾಗಮತಂತ್ರೇ:
ಆಧಾರೇ ಕಾಕಿನೀಚೈವ ಸ್ವಾಧಿಷ್ಠಾನೇ ಚ ರಾಕಿನಿ |
ಲಾಕಿನೀ ಮಣಿಪೂರೇ ಚ ಶಾಕಿನಿಶ್ಚ ಅನಾಹತೇ ||
ವಿಶುದ್ಧೌ ಡಾಕಿನೀಚೈವ ಆಜ್ಞಾಯಾಂ ಹಾಕಿನೀತಥಾ
ಬ್ರಹ್ಮಚಕ್ರೇ ತು ನಿರ್ಮಾಯಾ ಶಿಖಾಚಕ್ರೇ ನಿಭ್ರಾಂತಕಂ |
ಪಶ್ಚಿಮೇ ತು ನಿರ್ಭಿನ್ನಂ ಚ ಸ್ಥಾನೇ ಸ್ಥಾನೇ ಸಮಾಚರೇತ್ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu navaśaktigaḷa nele adentendaḍe:
Ādhāracakradalli kākiniśakti ihaḷu.
Svādhiṣṭhānacakradalli rākiniśakti ihaḷu.
Maṇipūrakacakradalli lākiniśakti ihaḷu.
Anāhatacakradalli śākiniśakti ihaḷu.
Viśud'dhicakradalli ḍākiniśakti ihaḷu.
Ājñācakradalli hākiniśakti ihaḷu.
Brahmacakradalli nirmāyaśakti ihaḷu.
Śikhācakradalli nibhrāntaśakti ihaḷu.
Paścimacakradalli nirbhinnaśakti ihaḷu nōḍā.
Idakke nirāmayāgamatantrē:
Ādhārē kākinīcaiva svādhiṣṭhānē ca rākini |
lākinī maṇipūrē ca śākiniśca anāhatē ||
viśud'dhau ḍākinīcaiva ājñāyāṁ hākinītathā
brahmacakrē tu nirmāyā śikhācakrē nibhrāntakaṁ |
paścimē tu nirbhinnaṁ ca sthānē sthānē samācarēt ||''
intendudāgi, apramāṇakūḍalasaṅgamadēvā