ಏನು ಏನೂ ಎನಲಿಲ್ಲದ ಮಹಾಘನ ನಿರಂಜನ ವಸ್ತುವಿನ
ನೆನಹುಮಾತ್ರದಲ್ಲಿ ನಿರ್ಭಿನ್ನ ಶಕ್ತಿ ಹುಟ್ಟಿದಳು.
ಆ ನಿರ್ಭಿನ್ನಶಕ್ತಿಯ ನೆನಹುಮಾತ್ರದಲ್ಲಿ ನಿಭ್ರಾಂತಶಕ್ತಿ ಹುಟ್ಟಿದಳು.
ಆ ನಿಭ್ರಾಂತಶಕ್ತಿಯ ನೆನಹುಮಾತ್ರದಲ್ಲಿ ನಿರ್ಮಾಯಶಕ್ತಿ ಹುಟ್ಟಿದಳು.
ಆ ನಿರ್ಮಾಯಶಕ್ತಿಯ ನೆನಹುಮಾತ್ರದಲ್ಲಿ ಹಾಕಿನಿಶಕ್ತಿ ಹುಟ್ಟಿದಳು.
ಆ ಹಾಕಿನಿಶಕ್ತಿಯ ನೆನಹುಮಾತ್ರದಲ್ಲಿ ಡಾಕಿನಿಶಕ್ತಿ ಹುಟ್ಟಿದಳು.
ಆ ಡಾಕಿನಿಶಕ್ತಿಯ ನೆನಹುಮಾತ್ರದಲ್ಲಿ ಶಾಕಿನಿಶಕ್ತಿ ಹುಟ್ಟಿದಳು.
ಆ ಶಾಕಿನಿಶಕ್ತಿಯ ನೆನಹುಮಾತ್ರದಲ್ಲಿ ಲಾಕಿನಿಶಕ್ತಿ ಹುಟ್ಟಿದಳು.
ಆ ಲಾಕಿನಿಶಕ್ತಿಯ ನೆನಹುಮಾತ್ರದಲ್ಲಿ ರಾಕಿನಿಶಕ್ತಿ ಹುಟ್ಟಿದಳು.
ಆ ರಾಕಿನಿಶಕ್ತಿಯ ನೆನಹುಮಾತ್ರದಲ್ಲಿ ಕಾಕಿನಿಶಕ್ತಿ ಹುಟ್ಟಿದಳು ನೋಡಾ.
ಇದಕ್ಕೆ ನಿರಾಮಯಾತೀತಾಗಮೇ:
ನಿರಂಜನ್ಯ ಮನೋಜ್ಞಾನಾನ್ನಿರ್ಭಿನ್ನಶ್ಚ ಸಮುದ್ಭವಃ |
ನಿರ್ಭಿನ್ನಸ್ಯ ಮನೋಜ್ಞಾನಾನ್ನಿಭ್ರಾಂತಶಕ್ತಿರುದ್ಭವಾ ||
ನಿಭ್ರಾಂತ ಮನೋಜ್ಞಾನಾನ್ನಿರ್ಮಾಯಂ ಚ ಸಮುದ್ಭವಂ |
ನಿರ್ಮಾಯಸ್ಯ ಮನೋಜ್ಞಾನಾತ್ ಹಾಕಿನೀಶಕ್ತಿರುದ್ಭವಾ ||
ಹಾಕಿನೇಶ್ಚ ಮನೋಜ್ಞಾನಾತ್ ಡಾಕಿನಿಶ್ಚ ಸಮುದ್ಭವಾ |
ಡಾಕಿನೇಶ್ಚ ಮನೋ ಜ್ಞಾನಾತ್ ಶಾಕಿನಿಶ್ಚ ಸಮುದ್ಭವಾ ||
ಶಾಕಿನೇಶ್ಚ ಮನೋ ಜ್ಞಾನಾತ್ ಲಾಕಿನಿಶ್ಚ ಸಮುದ್ಭವಾ |
ಲಾಕಿನೇಶ್ಚ ಮನೋ ಜ್ಞಾನಾತ್ ರಾಕಿನಿಶ್ಚ ಸಮುದ್ಬವಾ ||
ರಾಕಿನೇಶ್ಚ ಮನೋ ಜ್ಞಾನಾತ್ ಕಾಕಿನಿಶ್ಚ ಸಮುದ್ಭವಾ |
ಏಕೈಕಂ ಪ್ರಾಣಮಾಖ್ಯಾತಂ ಏಕೈಕಂತು ಸಮನ್ವಿತಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ēnu ēnū enalillada mahāghana niran̄jana vastuvina
nenahumātradalli nirbhinna śakti huṭṭidaḷu.
Ā nirbhinnaśaktiya nenahumātradalli nibhrāntaśakti huṭṭidaḷu.
Ā nibhrāntaśaktiya nenahumātradalli nirmāyaśakti huṭṭidaḷu.
Ā nirmāyaśaktiya nenahumātradalli hākiniśakti huṭṭidaḷu.
Ā hākiniśaktiya nenahumātradalli ḍākiniśakti huṭṭidaḷu.
Ā ḍākiniśaktiya nenahumātradalli śākiniśakti huṭṭidaḷu.
Ā śākiniśaktiya nenahumātradalli lākiniśakti huṭṭidaḷu.
Ā lākiniśaktiya nenahumātradalli rākiniśakti huṭṭidaḷu.
Ā rākiniśaktiya nenahumātradalli kākiniśakti huṭṭidaḷu nōḍā.
Idakke nirāmayātītāgamē:
Niran̄jan'ya manōjñānānnirbhinnaśca samudbhavaḥ |
nirbhinnasya manōjñānānnibhrāntaśaktirudbhavā ||
nibhrānta manōjñānānnirmāyaṁ ca samudbhavaṁ |
nirmāyasya manōjñānāt hākinīśaktirudbhavā ||
hākinēśca manōjñānāt ḍākiniśca samudbhavā |
Ḍākinēśca manō jñānāt śākiniśca samudbhavā ||
śākinēśca manō jñānāt lākiniśca samudbhavā |
lākinēśca manō jñānāt rākiniśca samudbavā ||
rākinēśca manō jñānāt kākiniśca samudbhavā |
ēkaikaṁ prāṇamākhyātaṁ ēkaikantu samanvitaṁ ||''
intendudāgi, apramāṇakūḍalasaṅgamadēvā