Index   ವಚನ - 479    Search  
 
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ ಆತ್ಮನುತ್ಪತ್ಯವಾದನು. ಆ ಪ್ರಣವದ ದರ್ಪಣಾಕಾರದಲ್ಲಿ ಸದಾಶಿವನುತ್ಪತ್ಯವಾದನು. ಆ ಪ್ರಣವದ ಅರ್ಧಚಂದ್ರಕದಲ್ಲಿ ಈಶ್ವರನುತ್ಪತ್ಯವಾದನು. ಆ ಪ್ರಣವದ ಕುಂಡಲಾಕಾರದಲ್ಲಿ ರುದ್ರನುತ್ಪತ್ಯವಾದನು. ಆ ಪ್ರಣವದ ದಂಡಕಸ್ವರೂಪದಲ್ಲಿ ವಿಷ್ಣು ಉತ್ಪತ್ಯವಾದನು ನೋಡಾ. ಇದಕ್ಕೆ ಬ್ರಹ್ಮೋತ್ತರಸೂತ್ರಸಾರೇ: ಓಂಕಾರ ಜ್ಯೋತಿರೂಪೇ ಚ ಜೀವಾತ್ಮಾ ತತ್ರ ಜಾಯತೇ | ಓಂಕಾರದರ್ಪಣಾಕಾರೇ ಸದಾಶಿವಶ್ಚ ಜಾಯತೇ || ಓಂಕಾರೇಚಾರ್ಧಚಂದ್ರೇ ಚ ಈಶ್ವರಃ ತತ್ರಜಾಯತೇ | ಓಂಕಾರ ಕುಂಡಲಾಕಾರೇ ಕಾಲರುದ್ರಶ್ಚ ಜಾಯತೇ || ಓಂಕಾರದಂಡರೂಪೇ ಚ ನಾರಾಯಣ ಸಮುದ್ಬವಾಃ | ಓಂಕಾರತಾರಕಾರೂಪೇ ವಿರಿಂಚಿಶ್ಚ ಸಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ