Index   ವಚನ - 478    Search  
 
ಇನ್ನು ನವಶಕ್ತಿಗಳ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ಕಾಕಿನಿಶಕ್ತಿ ಇಹಳು. ಸ್ವಾಧಿಷ್ಠಾನಚಕ್ರದಲ್ಲಿ ರಾಕಿನಿಶಕ್ತಿ ಇಹಳು. ಮಣಿಪೂರಕಚಕ್ರದಲ್ಲಿ ಲಾಕಿನಿಶಕ್ತಿ ಇಹಳು. ಅನಾಹತಚಕ್ರದಲ್ಲಿ ಶಾಕಿನಿಶಕ್ತಿ ಇಹಳು. ವಿಶುದ್ಧಿಚಕ್ರದಲ್ಲಿ ಡಾಕಿನಿಶಕ್ತಿ ಇಹಳು. ಆಜ್ಞಾಚಕ್ರದಲ್ಲಿ ಹಾಕಿನಿಶಕ್ತಿ ಇಹಳು. ಬ್ರಹ್ಮಚಕ್ರದಲ್ಲಿ ನಿರ್ಮಾಯಶಕ್ತಿ ಇಹಳು. ಶಿಖಾಚಕ್ರದಲ್ಲಿ ನಿಭ್ರಾಂತಶಕ್ತಿ ಇಹಳು. ಪಶ್ಚಿಮಚಕ್ರದಲ್ಲಿ ನಿರ್ಭಿನ್ನಶಕ್ತಿ ಇಹಳು ನೋಡಾ. ಇದಕ್ಕೆ ನಿರಾಮಯಾಗಮತಂತ್ರೇ: ಆಧಾರೇ ಕಾಕಿನೀಚೈವ ಸ್ವಾಧಿಷ್ಠಾನೇ ಚ ರಾಕಿನಿ | ಲಾಕಿನೀ ಮಣಿಪೂರೇ ಚ ಶಾಕಿನಿಶ್ಚ ಅನಾಹತೇ || ವಿಶುದ್ಧೌ ಡಾಕಿನೀಚೈವ ಆಜ್ಞಾಯಾಂ ಹಾಕಿನೀತಥಾ ಬ್ರಹ್ಮಚಕ್ರೇ ತು ನಿರ್ಮಾಯಾ ಶಿಖಾಚಕ್ರೇ ನಿಭ್ರಾಂತಕಂ | ಪಶ್ಚಿಮೇ ತು ನಿರ್ಭಿನ್ನಂ ಚ ಸ್ಥಾನೇ ಸ್ಥಾನೇ ಸಮಾಚರೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.