Index   ವಚನ - 480    Search  
 
ಇನ್ನು ನವಷಡ್ವಿಧ ಅಧಿದೇವತೆಗಳ ನೆಲೆ ಅದೆಂತೆಂದಡೆ: ಆಧಾರಚಕ್ರಕ್ಕೆ ಬ್ರಹ್ಮನಧಿದೇವತೆ. ಸ್ವಾಧಿಷ್ಠಾನಚಕ್ರಕ್ಕೆ ವಿಷ್ಣು ಅಧಿದೇವತೆ. ಮಣಿಪೂರಕಚಕ್ರಕ್ಕೆ ರುದ್ರನಧಿದೇವತೆ. ಅನಾಹತಚಕ್ರಕ್ಕೆ ಈಶ್ವರನಧಿದೇವತೆ. ವಿಶುದ್ಧಿಚಕ್ರಕ್ಕೆ ಸದಾಶಿವನಧಿದೇವತೆ. ಆಜ್ಞಾಚಕ್ರಕ್ಕೆ ಆತ್ಮನಧಿದೇವತೆ. ಬ್ರಹ್ಮಚಕ್ರಕ್ಕೆ ಅಂತರಾತ್ಮನೆಂಬ ಮಹಾಗುರುವೆ ಅಧಿದೇವತೆ. ಶಿಖಾಚಕ್ರಕ್ಕೆ ಪರಮಾತ್ಮನೆಂಬ ಮಹಾಲಿಂಗವೇ ಅಧಿದೇವತೆ. ಪಶ್ಚಿಮಚಕ್ರಕ್ಕೆ ಸರ್ವಾತ್ಮನೆಂಬ ಮಹಾಜಂಗಮವೆ ಅಧಿದೇವತೆ ನೋಡಾ. ಇದಕ್ಕೆ ಚಿತ್ಪ್ರಕಾಶಾಗಮೇ: ಆಧಾರೇ ಬ್ರಹ್ಮದೈವತಂ ಸ್ವಾಧಿಷ್ಠೇ ವಿಷ್ಣುದೈವತಂ | ರುದ್ರಂ ಚ ಮಣಿಪೂರೇ ಚ ಈಶ್ವರಂ ಚ ಅನಾಹತೇ || ವಿಶುದ್ಧಿಶ್ಚ ಶಿವಂ ಚೈವ ಆಜ್ಞೇಯ ಆತ್ಮದೈವತಂ | ಬ್ರಹ್ಮಚಕ್ರಂತರಾತ್ಮಾ ಚ ಶಿಖಾಚಕ್ರಪರಂ ತಥಾ | ಸರ್ವಾತ್ಮಾ ಪಶ್ಚಿಮಶ್ಚೆ ವ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.