Index   ವಚನ - 481    Search  
 
ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿ- ʼಸಿಂಹನಾದೋ ಭವತಿ | ಒಂ ಗುಹ್ಯಾತ್ಮಾ ದೇವತಾ'ಎಂದು ಶ್ರುತಿ. ಆ ಸಿಂಹನಾದದಲ್ಲಿ ದಿವ್ಯನಾದ ಉತ್ಪತ್ಯವಾಯಿತ್ತು. ಆ ದಿವ್ಯನಾದದಲ್ಲಿ ಪ್ರಣವನಾದ ಉತ್ಪತ್ಯವಾಯಿತ್ತು. ಆ ಪ್ರಣವನಾದದಲ್ಲಿ ಮೇಘನಾದ ಉತ್ಪತ್ಯವಾಯಿತ್ತು. ಆ ಮೇಘನಾದದಲ್ಲಿ ಭೇರೀನಾದ ಉತ್ಪತ್ಯವಾಯಿತ್ತು. ಆ ಭೇರೀನಾದದಲ್ಲಿ ಘಂಟಾನಾದ ಉತ್ಪತ್ಯವಾಯಿತ್ತು. ಆ ಘಂಟಾನಾದದಲ್ಲಿ ವೀಣಾನಾದ ಉತ್ಪತ್ಯವಾಯಿತ್ತು. ಆ ವೀಣಾನಾದದಲ್ಲಿ ಪೆಣ್ದುಂಬಿಯನಾದ ಉತ್ಪತ್ಯವಾಯಿತ್ತು. ಇದಕ್ಕೆ ಅಥರ್ವಣವೇದೇ: ಓಂ ಪರಬ್ರಹ್ಮೇ ಸಿಂಹನಾದೋ ಜನಿತಾ | ಸಿಂಹನಾದೇ ದಿವ್ಯನಾದೋ ಭವತಿ | ದಿವ್ಯನಾದೇ ಪ್ರಣವನಾದೋ ಭವತಿ | ಪ್ರಣವನಾದೇ ಮೇಘನಾದೋ ಜನಿತಾ || ಮೇಘನಾದೇ ಭೇರೀನಾದೋ ಭವತಿ | ಭೇರೀನಾದೇ ಘಂಟಾನಾದೋ ಜನಿತಾ | ಘಂಟಾನಾದಸ್ಯ ವೀಣಾನಾದೋ ಭವತಿ | ವೀಣಾನಾದೇ ಭ್ರಮರನಾದೋ ಜನಿತಾ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.