ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿ-
ʼಸಿಂಹನಾದೋ ಭವತಿ | ಒಂ ಗುಹ್ಯಾತ್ಮಾ ದೇವತಾ'ಎಂದು ಶ್ರುತಿ.
ಆ ಸಿಂಹನಾದದಲ್ಲಿ ದಿವ್ಯನಾದ ಉತ್ಪತ್ಯವಾಯಿತ್ತು.
ಆ ದಿವ್ಯನಾದದಲ್ಲಿ ಪ್ರಣವನಾದ ಉತ್ಪತ್ಯವಾಯಿತ್ತು.
ಆ ಪ್ರಣವನಾದದಲ್ಲಿ ಮೇಘನಾದ ಉತ್ಪತ್ಯವಾಯಿತ್ತು.
ಆ ಮೇಘನಾದದಲ್ಲಿ ಭೇರೀನಾದ ಉತ್ಪತ್ಯವಾಯಿತ್ತು.
ಆ ಭೇರೀನಾದದಲ್ಲಿ ಘಂಟಾನಾದ ಉತ್ಪತ್ಯವಾಯಿತ್ತು.
ಆ ಘಂಟಾನಾದದಲ್ಲಿ ವೀಣಾನಾದ ಉತ್ಪತ್ಯವಾಯಿತ್ತು.
ಆ ವೀಣಾನಾದದಲ್ಲಿ ಪೆಣ್ದುಂಬಿಯನಾದ ಉತ್ಪತ್ಯವಾಯಿತ್ತು.
ಇದಕ್ಕೆ ಅಥರ್ವಣವೇದೇ:
ಓಂ ಪರಬ್ರಹ್ಮೇ ಸಿಂಹನಾದೋ ಜನಿತಾ |
ಸಿಂಹನಾದೇ ದಿವ್ಯನಾದೋ ಭವತಿ |
ದಿವ್ಯನಾದೇ ಪ್ರಣವನಾದೋ ಭವತಿ |
ಪ್ರಣವನಾದೇ ಮೇಘನಾದೋ ಜನಿತಾ ||
ಮೇಘನಾದೇ ಭೇರೀನಾದೋ ಭವತಿ |
ಭೇರೀನಾದೇ ಘಂಟಾನಾದೋ ಜನಿತಾ |
ಘಂಟಾನಾದಸ್ಯ ವೀಣಾನಾದೋ ಭವತಿ |
ವೀಣಾನಾದೇ ಭ್ರಮರನಾದೋ ಜನಿತಾ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Niśśabdavemba parabrahmada nenahumātradalli-
ʼsinhanādō bhavati | oṁ guhyātmā dēvatā'endu śruti.
Ā sinhanādadalli divyanāda utpatyavāyittu.
Ā divyanādadalli praṇavanāda utpatyavāyittu.
Ā praṇavanādadalli mēghanāda utpatyavāyittu.
Ā mēghanādadalli bhērīnāda utpatyavāyittu.
Ā bhērīnādadalli ghaṇṭānāda utpatyavāyittu.
Ā ghaṇṭānādadalli vīṇānāda utpatyavāyittu.
Ā vīṇānādadalli peṇdumbiyanāda utpatyavāyittu.
Idakke atharvaṇavēdē:
Ōṁ parabrahmē sinhanādō janitā |
sinhanādē divyanādō bhavati |
divyanādē praṇavanādō bhavati |
praṇavanādē mēghanādō janitā ||
mēghanādē bhērīnādō bhavati |
bhērīnādē ghaṇṭānādō janitā |
ghaṇṭānādasya vīṇānādō bhavati |
vīṇānādē bhramaranādō janitā ||''
intendudāgi,
apramāṇakūḍalasaṅgamadēvā