Index   ವಚನ - 482    Search  
 
ಇನ್ನು ಅಷ್ಟನಾದದ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ಪೆಣ್ದುಂಬಿಯನಾದವಿಹುದು. ಸ್ವಾಧಿಷ್ಠಾನಚಕ್ರದಲ್ಲಿ ವೀಣಾನಾದವಿಹುದು. ಮಣಿಪೂರಕ ಚಕ್ರದಲ್ಲಿ ಘಂಟಾನಾದವಿಹುದು. ಅನಾಹತಚಕ್ರದಲ್ಲಿ ಭೇರೀನಾದವಿಹುದು. ವಿಶುದ್ಧಿಚಕ್ರದಲ್ಲಿ ಮೇಘಧ್ವನಿನಾದವಿಹುದು. ಆಜ್ಞಾಚಕ್ರದಲ್ಲಿ ಪ್ರಣವನಾದವಿಹುದು. ಬ್ರಹ್ಮಚಕ್ರದಲ್ಲಿ ದಿವ್ಯನಾದವಿಹುದು. ಶಿಖಾಚಕ್ರದಲ್ಲಿ ಸಿಂಹನಾದವಿಹುದು ನೋಡಾ. ಇದಕ್ಕೆ ರುದ್ರಕೋಟಿ ಸಂಹಿತಾಯಾಂ: ಆಧಾರೇ ಭ್ರಮರಂ ಚೈವ ಸ್ವಾಧಿಷ್ಠೇ ವೀಣಕಂ ತಥಾ | ಮಣಿಪೂರೇ ಚ ಘಂಟಾ ಚ ಭೇರೀನಾದಂಚಾನಾಹತಂ || ವಿಶುದ್ಧೌ ಮೇಘನಾದಂ ಚ ಆಜ್ಞೇ ಪ್ರಣವನಾದಕಂ | ಬ್ರಹ್ಮಾ ಚ ದಿವ್ಯನಾದಂ ಚ ಸಿಂಹನಾದೇ ಶಿಖಾಗ್ರಕಂ | ಏವಮಷ್ಟನಾದಂ ಜ್ಞಾತ್ವಾ ದುರ್ಲಬಂ ಕಮಲಾನನೇ ||'' ಇಂತೆಂದುದಾಗಿ,ಅಪ್ರಮಾಣಕೂಡಲಸಂಗಮದೇವ.