Index   ವಚನ - 499    Search  
 
ಆ ಆದಿ ಉಕಾರ, ಆ ಆದಿ ಮಕಾರ, ಆ ಆದಿ ಅಕಾರಕ್ಕೆ ಆ ಆದಿಬಿಂದು, ಆ ಆದಿಕಲೆ, ಆ ಆದಿನಾದವೆ ಆಧಾರ. ಆ ಆದಿಬಿಂದು, ಆದಿಕಲೆ, ಆದಿನಾದಕ್ಕೆ ಆ ಆದಿಪ್ರಕೃತಿಯೇ ಆಧಾರ. ಆ ಆದಿಪ್ರಕೃತಿಪ್ರಣವಕ್ಕೆ ಪ್ರಾಣಮಾತ್ರೆಪ್ರಣವವೇ ಆಧಾರ. ಆ ಪ್ರಾಣಮಾತ್ರೆಪ್ರಣವಕ್ಕೆ ಅಖಂಡಜ್ಯೋತಿರ್ಮಯಲಿಂಗವೇ ಆಧಾರ. ಉ ಎಂದರೆ ಆದಿಬಿಂದುಳಿದು ಮ ಎಂಬ ಆದಿಕಲೆಯಲ್ಲಿ ಸಂಯುಕ್ತವಾಗಿ, ಅ ಎಂಬ ಆದಿನಾದದಲ್ಲಿ ಮ ಎಂಬ ಅನುಸ್ವಾರ ಬಂದು ಕೂಡಲು, ಅಖಂಡಜ್ಯೋತಿರ್ಮಯವಾಗಿಹ ಪರಮೋಂಕಾರವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.