ಆ ಇಷ್ಟ ಪ್ರಾಣ ಭಾವಲಿಂಗವೆಂಬ ಆದಿಪ್ರಣವತ್ರಿತಯದಲ್ಲಿ
ತಾರಕಾಸ್ವರೂಪ, ದಂಡಸ್ವರೂಪ, ಕುಂಡಲಾಕಾರ,
ಅರ್ಧಚಂದ್ರಕ, ದರ್ಪಣಾಕಾರ, ಜ್ಯೋತಿಸ್ವರೂಪವೆಂಬ
ಷಟ್ಪ್ರಣವ ಉತ್ಪತ್ಯ ಲಯ ನೋಡಾ.
ಇದಕ್ಕೆ ಪ್ರಳಯಕಾಲರುದ್ರೋಪನಿಷತ್:
ಉಕಾರವೆಂಬ ಪ್ರಣವದಲ್ಲಿ-
ದಂಡಶ್ಚ ತಾರಕಾಕಾರೋ ಭವತಿ ಓಂ ಇಷ್ಟಲಿಂಗೋ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ಅಷ್ಟಾದಶ ನವಮಪ್ರಣವಾಂಶಕೇ ||''
ಮಕಾರವೆಂಬ ಪ್ರಣವದಲ್ಲಿ-
ಕುಂಡಲಶ್ಚಾರ್ಧಚಂದ್ರೋ ಭವತಿ ಓಂ ಪ್ರಾಣಲಿಂಗೋ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ನವದಶ ಪ್ರಣವಾಂಶಕೇ ||''
ಅಕಾರವೆಂಬ ಪ್ರಣವದಲ್ಲಿ-
ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಭಾವಲಿಂಗೋ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ಏಕಾದಶ ಪ್ರಣವಾಂಶಕೇ ||
ಉಕಾರೇ ಚ ಮಕಾರೇ ಚ ಅಕಾರೇ ಚ ತ್ರಿಯಕ್ಷರಂ |
ಅಕಾರಮಾದಿನಾದಂ ಚ ಉಕಾರಮಾದಿಬಿಂದವಃ ||
ಮಕಾರಾದಿ ಕಲಾಶ್ಚೈವ ನಾದಬಿಂದುಕಲಾತ್ಮನೇ |
ನಾದಬಿಂದುಕಲಾಯುಕ್ತೋ ಅಖಂಡೋಂಕಾರಜ್ಯೋತಿಭಿಃ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā iṣṭa prāṇa bhāvaliṅgavemba ādipraṇavatritayadalli
tārakāsvarūpa, daṇḍasvarūpa, kuṇḍalākāra,
ardhacandraka, darpaṇākāra, jyōtisvarūpavemba
ṣaṭpraṇava utpatya laya nōḍā.
Idakke praḷayakālarudrōpaniṣat:
Ukāravemba praṇavadalli-
daṇḍaśca tārakākārō bhavati ōṁ iṣṭaliṅgō dēvatā |
ukārē ca layaṁ prāptē aṣṭādaśa navamapraṇavānśakē ||''
makāravemba praṇavadalli-
Kuṇḍalaścārdhacandrō bhavati ōṁ prāṇaliṅgō dēvatā |
makārē ca layaṁ prāptē navadaśa praṇavānśakē ||''
akāravemba praṇavadalli-
darpaṇaśca jyōtirūpō bhavati ōṁ bhāvaliṅgō dēvatā |
akārē ca layaṁ prāptē ēkādaśa praṇavānśakē ||
ukārē ca makārē ca akārē ca triyakṣaraṁ |
akāramādinādaṁ ca ukāramādibindavaḥ ||
Makārādi kalāścaiva nādabindukalātmanē |
nādabindukalāyuktō akhaṇḍōṅkārajyōtibhiḥ ||''
intendudāgi, apramāṇakūḍalasaṅgamadēvā