Index   ವಚನ - 508    Search  
 
ಪೃಥ್ವಿಭೂತದಲ್ಲಿ ಸುಚಿತ್ತಹಸ್ತವಿಹುದು, ಅಪ್ಪುಭೂತದಲ್ಲಿ ಸುಬುದ್ಧಿಹಸ್ತವಿಹುದು, ತೇಜಭೂತದಲ್ಲಿ ನಿರಹಂಕಾರಹಸ್ತವಿಹುದು, ವಾಯುಭೂತದಲ್ಲಿ ಸುಮನಹಸ್ತವಿಹುದು, ಆಕಾಶಭೂತದಲ್ಲಿ ಸುಜ್ಞಾನಹಸ್ತವಿಹುದು, ಆತ್ಮಭೂತದಲ್ಲಿ ಭಾವಹಸ್ತವಿಹುದು ನೋಡಾ. ಇದಕ್ಕೆ ಈಶ್ವರೋsವಾಚ: ಪೃಥ್ವೀ ಚ ಚಿತ್ತಮಾಶ್ರಿತ್ಯ ಹಸ್ತೇ ಬುದ್ಧಿಃ ಸಮಾಚರೇತ್ | ಅಹಂಕಾರಶ್ಚ ತೇಜಶ್ಚ ಮಾರುತಂ ಚ ಮನಃ ಶ್ರಿತಾ || ಆಕಾಶೋ ಜ್ಞಾನಮಾಶ್ರಿತ್ಯ ಆತ್ಮಾ ಚ ಭಾವಮಾಶ್ರಿತಃ | ಇತಿ ಹಸ್ತಸ್ಯಹನ್ಯಾಸಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.