Index   ವಚನ - 509    Search  
 
ಆ ಅಖಂಡಜ್ಯೋತಿರ್ಮಯವಾಗಿಹ ಪರಮೋಂಕಾರಪ್ರಣವದ ಜ್ಯೋತಿಸ್ವರೂಪದಲ್ಲಿ ಮಹಾಲಿಂಗ ಉತ್ಪತ್ಯವಾಯಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಪ್ರಸಾದಲಿಂಗ ಹುಟ್ಟಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಜಂಗಮಲಿಂಗ ಹುಟ್ಟಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಶಿವಲಿಂಗ ಹುಟ್ಟಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಗುರುಲಿಂಗ ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ಆಚಾರಲಿಂಗ ಹುಟ್ಟಿತ್ತು ನೋಡಾ. ಇದಕ್ಕೆ ಶಿವಲಿಂಗಾಗಮೇ: ಓಂಕಾರ ಜ್ಯೋತಿರೂಪೇ ಚ ಮಹಾಲಿಂಗಂ ಚ ಜಾಯತೇ | ಓಂಕಾರ ದರ್ಪಣಾಕಾರೇ ಪ್ರಸಾದಲಿಂಗೋ ಜಾಯತೇ || ಓಂಕಾರೇಚಾರ್ಧಚಂದ್ರೇ ಚ ಜಂಗಮಂ ಚಾಪಿ ಜಾಯತೇ | ಓಂಕಾರ ದಂಡರೂಪೇ ಚ ಗುರುಲಿಂಗಂ ಚ ಜಾಯತೇ || ಓಂಕಾರ ತಾರಕಾರೂಪೇ ಆಚಾರಶ್ಚ ಸಜಾಯತೇ | ಇತಿ ಷಡ್ಲಿಂಗಮುತ್ಪನ್ನಂ ಸುಸೂಕ್ಷ್ಮಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.