Index   ವಚನ - 511    Search  
 
ಪೃಥ್ವಿಯೆಂಬ ಮಹಾಭೂತದಲ್ಲಿ ಆಚಾರಲಿಂಗವಿಹುದು. ಅಪ್ಪುವೆಂಬ ಮಹಾಭೂತದಲ್ಲಿ ಗುರುಲಿಂಗವಿಹುದು. ತೇಜವೆಂಬ ಮಹಾಭೂತದಲ್ಲಿ ಶಿವಲಿಂಗ ನ್ಯಾಸವಾಗಿಹುದು. ವಾಯುವೆಂಬ ಮಹಾಭೂತದಲ್ಲಿ ಚರಲಿಂಗ ನ್ಯಾಸವಾಗಿಹುದು. ಆಕಾಶವೆಂಬ ಮಹಾಭೂತದಲ್ಲಿ ಪ್ರಸಾದಲಿಂಗ ನ್ಯಾಸವಾಗಿಹುದು. ಆತ್ಮನೆಂಬ ಮಹಾಭೂತದಲ್ಲಿ ಮಹಾಲಿಂಗ ನ್ಯಾಸವಾಗಿಹುದು ನೋಡಾ. ಇದಕ್ಕೆ ಶಿವಲಿಂಗಸೂತ್ರೇ: ಆಚಾರಂ ಪೃಥ್ವಿಭೂತೇ ಚ ಜಲೇ ಚ ಗುರುಲಿಂಗಕಂ | ತೇಜಸ್ಯಪಿ ಶಿವಲಿಂಗಕಂ ವಾಯೌ ಚ ಚರಲಿಂಗಕಂ || ಪ್ರಸಾದಲಿಂಗಂ ಚಾಕಾಶೇ ಆತ್ಮನ್ಯಪಿ ಮಹಸ್ತಥಾ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.