Index   ವಚನ - 513    Search  
 
ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿನ ಆಚಾರಲಿಂಗವು ಸಮಸ್ತವಾದ ತತ್ವಂಗಳ ನಿವಾಸಕ್ಕೋಸುಗ ಆಧಾರವಾದುದಾಗಿ, ಕರ್ಮರೂಪವಾದ ಕ್ರಿಯೆಯೆಂಬ ತನ್ನ ಶಕ್ತಿಯಿಂದ ಸರಿಯಿಲ್ಲದುದಾಗಿ ಚಿತ್ತದಿಂದ ಧರಿಸಲು ತಕ್ಕಂಥಾದುದಾಗಿ ಆಶ್ರಯಿಸಲು ಪಟ್ಟ ಮೋಕ್ಷಮಾರ್ಗ ಉಳ್ಳುದಾಗಿ ಇದ್ದುದು ನೋಡಾ ಆಚಾರಲಿಂಗ ಇದಕ್ಕೆ ಮಹಾವಾತುಲಾಗಮೇ: ವಸಂತತಿಲಕವೃತ್ತ- ಕರ್ಮಾತ್ಮನಾ ಸಕಲತತ್ವ ನಿವಾಸಹೇತೋ ರಾಧಾರಭೂತಮತುಲಂ ಕ್ರಿಯಯಾ ಸ್ವ ಶಕ್ತ್ಯಾ | ಚಿತ್ತೇನ ಧಾರ್ಯಮತಿರೂಢ ನಿವೃತ್ತಿಮಾರ್ಗಂ ಆಚಾರಲಿಂಗಮಿತಿ ವೇದವಿದೋ ವದಂತಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.