Index   ವಚನ - 514    Search  
 
ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿಹ ಗುರುಲಿಂಗವನು ಕರ್ತೃತ್ವನಾಗಿಯು ತನ್ನ ಜ್ಞಾನಶಕ್ತಿಯ ವೈಭವದಿಂದ ಸಮಸ್ತವಾದ ಉಪದೇಶ ವಿಧಾನ ಶಾಸ್ತ್ರಂಗಳಲ್ಲಿ ಮಾಡಲ್ಪಟ್ಟ ಆಸ್ಪದವನುಳ್ಳುದಾಗಿಯು, ಕಡೆಯಿಲ್ಲದ ಸುಖಸಮುದ್ರವನಾಗಿಯು, ಬುದ್ಧಿತತ್ವದಾಸ್ಥಾನದಲ್ಲಿ ಪ್ರತಿಷ್ಠಿತನಾಗಿಹ ಗುರುಲಿಂಗವಿಹುದು ನೋಡಾ, ಇದಕ್ಕೆ ಮಹಾವಾತುಲಾಗಮೇ: ವೃತ್ತ- ಸ್ವಜ್ಞಾನ ಶಕ್ತಿವಿಭವೋದಿತ ಕರ್ತೃತ್ವಂ | ಸರ್ವೋಪದೇಶವಿದಿತಂ ತತ್ರಕೃತಂ ಪ್ರತಿಷ್ಠಿತಂ, | ತೇಜೋನಿಧಿಂ ಪರಮಪಾಠ ಸುಖಾಂಬುರಾಸಿ ಬುದ್ಧೇಃ ಪದೇ ವಿನಿಹಿತಂ ಗುರುಲಿಂಗಮಾಹುಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.