ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿಹ
ಗುರುಲಿಂಗವನು ಕರ್ತೃತ್ವನಾಗಿಯು ತನ್ನ ಜ್ಞಾನಶಕ್ತಿಯ ವೈಭವದಿಂದ
ಸಮಸ್ತವಾದ ಉಪದೇಶ ವಿಧಾನ ಶಾಸ್ತ್ರಂಗಳಲ್ಲಿ ಮಾಡಲ್ಪಟ್ಟ
ಆಸ್ಪದವನುಳ್ಳುದಾಗಿಯು, ಕಡೆಯಿಲ್ಲದ ಸುಖಸಮುದ್ರವನಾಗಿಯು,
ಬುದ್ಧಿತತ್ವದಾಸ್ಥಾನದಲ್ಲಿ ಪ್ರತಿಷ್ಠಿತನಾಗಿಹ
ಗುರುಲಿಂಗವಿಹುದು ನೋಡಾ,
ಇದಕ್ಕೆ ಮಹಾವಾತುಲಾಗಮೇ: ವೃತ್ತ-
ಸ್ವಜ್ಞಾನ ಶಕ್ತಿವಿಭವೋದಿತ ಕರ್ತೃತ್ವಂ |
ಸರ್ವೋಪದೇಶವಿದಿತಂ ತತ್ರಕೃತಂ ಪ್ರತಿಷ್ಠಿತಂ, |
ತೇಜೋನಿಧಿಂ ಪರಮಪಾಠ ಸುಖಾಂಬುರಾಸಿ
ಬುದ್ಧೇಃ ಪದೇ ವಿನಿಹಿತಂ ಗುರುಲಿಂಗಮಾಹುಃ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Appuve aṅgavāda mahēśvarana subud'dhihastadalliha
guruliṅgavanu kartr̥tvanāgiyu tanna jñānaśaktiya vaibhavadinda
samastavāda upadēśa vidhāna śāstraṅgaḷalli māḍalpaṭṭa
āspadavanuḷḷudāgiyu, kaḍeyillada sukhasamudravanāgiyu,
bud'dhitatvadāsthānadalli pratiṣṭhitanāgiha
guruliṅgavihudu nōḍā,
idakke mahāvātulāgamē: Vr̥tta-
svajñāna śaktivibhavōdita kartr̥tvaṁ |
sarvōpadēśaviditaṁ tatrakr̥taṁ pratiṣṭhitaṁ, |
tējōnidhiṁ paramapāṭha sukhāmburāsi
bud'dhēḥ padē vinihitaṁ guruliṅgamāhuḥ ||''
intendudāgi, apramāṇakūḍalasaṅgamadēvā