Index   ವಚನ - 515    Search  
 
ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿಹ ಶಿಲಿಂಗವು ಜ್ಞಾನಕಲೆಗಳಿಂದ ಕೂಡಿದ ರೂಪದಿಂದ ಮಿಗೆ ಒಪ್ಪುತಿದ್ದಂಥಾದಾಗಿ, ಒಂದು ಮುಖವಾಗಿ, ಮಿಗೆ ಶಾಂತವಾದ ದಿವ್ಯತೇಜಃಪುಂಜವನು, ಅಹಂಕಾರಕ್ಕೆ ಸ್ಥಾನವಪ್ಪ ಪ್ರಪಂಚದಲ್ಲಿ ತನ್ನ ಇಚ್ಛಾಶಕ್ತಿಯಿಂದ ವ್ಯಾಪಿಸಲುಪಟ್ಟ ಮೂರ್ತೀಕರಿಸಿದ ತತ್ವವಾದ ಶಿವಲಿಂಗವಿಹುದು ನೋಡಾ. ಇದಕ್ಕೆ ಮಹಾವಾತುಲಾಗಮೇ: ವೃತ್ತ- ವಿದ್ಯಾಕಲಾಕಲಿತರೂಪಸು ಶೋಭಮಾನಂ ದಿವ್ಯಂ ಪ್ರಭಾಪಟಲಮೇಕಮುಖಂ ಪ್ರಶಾಂತಂ | ಇಚ್ಛಾಶಕ್ತಿಪರ ಝೃಂಬಿತಮೂರ್ತಿತತ್ವಂ ವ್ಯಕ್ತೋಹ್ಯಹಂಕೃತಿಪದೇ ಶಿವಲಿಂಗಮಾಹುಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.