Index   ವಚನ - 516    Search  
 
ವಾಯುವೇ ಅಂಗವಾದ ಪ್ರಾಣಲಿಂಗಿಯ ಸುಮನವೆಂಬ ಹಸ್ತದಲ್ಲಿಹ ಚರಲಿಂಗವು ಅಂತರಂಗದೊಡನೆ ಕೂಡಿ ವರ್ತಿಸುವುದಾಗಿ, ಬಹಿರಂಗಸಹಿತವಾಗಿ, ಅಮೂರ್ತನಹ ವಸ್ತು ತತ್ವವಾಗಿ, ಅಕ್ಷರವಪ್ಪ ಪ್ರಕೃತಿಗಿಂದಲು ಪರತತ್ವವೆಂಬ ಹೆಸರುಳ್ಳ ಜ್ಯೋತಿಸ್ವರೂಪನಪ್ಪ, ಪುರುಷನಹನು, ತನ್ನ ಆತ್ಮಮೂರ್ತಿಯಹಂಥ ಆದಿಶಕ್ತಿಯೊಡನೆ ಕೂಡಿದಂತಾಗಿ ಮನಸ್ಸಿನಿಂದವೆ ಎಲ್ಲಾಗಳೂ ಧ್ಯಾನವಮಾಡಲು ತಕ್ಕಂಥಾ ಚರಲಿಂಗವೆಂದು ಆಪ್ತವಾದ ಬುದ್ಧಿಯನುಳ್ಳ ಮಹಾತ್ಮರು ಹೇಳುತ್ತಿಹರು ನೋಡಾ. ಇದಕ್ಕೆ ಮಹಾವಾತುಲಾಗಮೇ: ವೃತ್ತ- ಸಾಭ್ಯಾಂತರಂ ಸಬಹಿರಂಗಮಮೂರ್ತಿತತ್ವಂ ಜ್ಯೋತಿರ್ಮಯಂ ಪುರುಷಮಕ್ಷರತಃ ಪರಾಖ್ಯಂ ಸ್ವಾತ್ಮಾದಿ ಶಕ್ತಿಘಟಿತಂ ಮನಸ್ಯೇವ ನಿತ್ಯಂ ಧ್ಯಾತವ್ಯರೂಪಮಿತಿಂ ಯರಲಿಂಗಮಾಹುಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.