ಆಕಾಶವೇ ಅಂಗವಾದ ಶರಣ ಸುಜ್ಞಾನವೆಂಬ ಹಸ್ತದಲ್ಲಿ
ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ
ಶಬ್ದವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ.
ಇದಕ್ಕೆ ಈಶ್ವರೋsವಾಚ:
ಜ್ಞಾನಹಸ್ತೇನ ಶರಣಂ ವ್ಯೋಮಾಂಗಶ್ಚ ಪ್ರಸಾದಿತೇ
ಶ್ರೋತ್ರೇ ಚ ತನ್ಮುಖಿ ಚೈವ ಅರ್ಪಿತಂ ಶಬ್ದಭೋಕ್ತವಾನ್ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ākāśavē aṅgavāda śaraṇa sujñānavemba hastadalli
prasādaliṅgakke śrōtravemba mukhadalli
śabdava samarpaṇava māḍi
tr̥ptiyane bhōgisuvanu nōḍā.
Idakke īśvarōsvāca:
Jñānahastēna śaraṇaṁ vyōmāṅgaśca prasāditē
śrōtrē ca tanmukhi caiva arpitaṁ śabdabhōktavān ||''
intendudāgi, apramāṇakūḍalasaṅgamadēvā.