Index   ವಚನ - 529    Search  
 
ಭಕ್ತನಾಚಾರಲಿಂಗದಲ್ಲಿ ಭೋಜ್ಯ ಸಮರ್ಪಣವು. ಭಕ್ತನಲ್ಲಿಹ ಮಹೇಶ್ವರನ ಗುರುಲಿಂಗದಲ್ಲಿ ಪಾನೀಯ ಸಮರ್ಪಣವು. ಭಕ್ತನಲ್ಲಿಹ ಪ್ರಸಾದಿಯ ಶಿವಲಿಂಗದಲ್ಲಿ ಭಕ್ಷ್ಯ ಸಮರ್ಪಣವು. ಭಕ್ತನಲ್ಲಿಯ ಪ್ರಾಣಲಿಂಗಿಯ ಜಂಗಮಲಿಂಗದಲ್ಲಿ ಚೋಹ್ಯ ಸಮರ್ಪಣವು. ಭಕ್ತನಲ್ಲಿಯ ಶರಣನ ಪ್ರಸಾದಲಿಂಗದಲ್ಲಿ ಲೇಹ್ಯ ಸಮರ್ಪಣವು. ಭಕ್ತನಲ್ಲಿಯ ಐಕ್ಯನ ಮಹಾಲಿಂಗದಲ್ಲಿ ಭೋಜ್ಯ ಪಾನೀಯ ಭಕ್ಷ್ಯ ಚೋಹ್ಯ ಲೇಹ್ಯವೆಂಬ ಎಲ್ಲಾ ರುಚಿದ್ರವ್ಯಂಗಳನು ಸಮರ್ಪಣವಂ ಮಾಡಿ ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.