Index   ವಚನ - 530    Search  
 
ಇನ್ನು ಕರಣಾರ್ಪಣಸ್ಥಲಂಗಳೆಂತೆಂದಡೆ: ಭೂಮಿಯೇ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಲ್ಲಿ ಆಚಾರಲಿಂಗದಲ್ಲಿ ಘ್ರಾಣವೆಂಬ ಮುಖದಲ್ಲಿ ಬೇರು ಗೆಣಸು ಮೊದಲಾದ ಗಂಧದ್ರವ್ಯಮಂ ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.