Index   ವಚನ - 538    Search  
 
ಆ ಮಹಾಹೇಶ್ವರನಲ್ಲಿಯ ಪ್ರಾಣಲಿಂಗಿಗೆ ಅಪ್ಪುವಿನಲ್ಲಿಯ ವಾಯುವೆ ಅಂಗ. ಆ ಅಂಗಕ್ಕೆ ಸುಬುದ್ಧಿಯಲ್ಲಿಯ ಸುಮನವೇ ಹಸ್ತ. ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ, ಆ ಜಂಗಮಲಿಂಗಮುಖದಲ್ಲಿ ಅಮೃತವಾದ ರುಚಿಯ ದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.