ಇನ್ನು ಶರಣನಲ್ಲಿಯ ಷಡ್ವಿಧ ಷಡುಸ್ಥಲಲಿಂಗ
ಮಿಶ್ರಾರ್ಪಣ ಭೇದವೆಂತೆಂದಡೆ:
ಆಕಾಶವೆ ಅಂಗವಾದ ಶರಣನ ಸುಜ್ಞಾನವೆಂಬ ಹಸ್ತದಲ್ಲಿ
ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ
ಪಾತ್ರದಲ್ಲಿ ಹುಟ್ಟಿದ ಸುನಾದಾಳಾಪನೆಯ ಶಬ್ದದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu śaraṇanalliya ṣaḍvidha ṣaḍusthalaliṅga
miśrārpaṇa bhēdaventendaḍe:
Ākāśave aṅgavāda śaraṇana sujñānavemba hastadalli
prasādaliṅgakke śrōtravemba mukhadalli
pātradalli huṭṭida sunādāḷāpaneya śabdadravyavanu
samarpaṇavaṁ māḍi tr̥ptiyane bhōgisuvanu nōḍā
apramāṇakūḍalasaṅgamadēvā.