Index   ವಚನ - 552    Search  
 
ಆ ಪ್ರಾಣಲಿಂಗಿಯಲ್ಲಿಯ ಐಕ್ಯಂಗೆ ವಾಯುವಿನಲ್ಲಿಯ ಆತ್ಮನೇ ಅಂಗ. ಆ ಅಂಗಕ್ಕೆ ಸುಮನದಲ್ಲಿಯ ಭಾವವೇ ಹಸ್ತ. ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಮಹಾಲಿಂಗವೇ ಲಿಂಗ. ಆ ಮಹಾಲಿಂಗದಮುಖದಲ್ಲಿ ಇವೆಲ್ಲರಲ್ಲಿಯ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.