ಇನ್ನು ಶರಣನಲ್ಲಿಯ ಭಕ್ತಂಗೆ
ಆಕಾಶದಲ್ಲಿಯ ಪೃಥ್ವಿಯೇ ಅಂಗ.
ಆ ಅಂಗಕ್ಕೆ ಸುಜ್ಞಾನದಲ್ಲಿಯ ಸುಚಿತ್ತವೇ ಹಸ್ತ.
ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ
ಆಚಾರಲಿಂಗವೇ ಲಿಂಗ.
ಆ ಆಚಾರಲಿಂಗದ ಮುಖದಲ್ಲಿ
ತಾಳ ಕೌಂಸಾಳದಲ್ಲಿ ಹುಟ್ಟಿದ
ಶಬ್ದದ್ರವ್ಯವ ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.