Index   ವಚನ - 553    Search  
 
ಇನ್ನು ಶರಣನಲ್ಲಿಯ ಷಡ್ವಿಧ ಷಡುಸ್ಥಲಲಿಂಗ ಮಿಶ್ರಾರ್ಪಣ ಭೇದವೆಂತೆಂದಡೆ: ಆಕಾಶವೆ ಅಂಗವಾದ ಶರಣನ ಸುಜ್ಞಾನವೆಂಬ ಹಸ್ತದಲ್ಲಿ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಪಾತ್ರದಲ್ಲಿ ಹುಟ್ಟಿದ ಸುನಾದಾಳಾಪನೆಯ ಶಬ್ದದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.