Index   ವಚನ - 574    Search  
 
ನಕಾರವೇ ರುಧಿರಮಯವಾಗಿಹುದು. ಮಕಾರವೇ ಮಾಂಸಮಯವಾಗಿಹುದು. ಶಿಕಾರವೇ ಮೇದಸ್ಸುಮಯವಾಗಿಹುದು. ವಕಾರವೇ ಅಸ್ಥಿಮಯವಾಗಿಹುದು. ಯಕಾರವೇ ಮಜ್ಜೆಮಯವಾಗಿಹುದು. ಓಂಕಾರವೇ ಶುಕ್ಲಮಯವಾಗಿಹುದು. ಈ ಷಡಕ್ಷರವೇ ಆಚಾರಾದಿ ಮಹಾಲಿಂಗಂಗಳಾಗಿಹುದು ನೋಡಾ. ಇದಕ್ಕೆ ದಿವ್ಯಾಗಮೇ: ನಕಾರೋ ರುಧಿರೇಸ್ಯಾತ್ತು ಮಕಾರೋ ಮಾಂಸ ಸಂಚಯಃ | ಶಿಕಾರೋ ಮೇಧಸೀಸ್ಯಾತ್ತು ವಕಾರಸ್ಥಾತುಮಸ್ಥಿಷು || ಯಕಾರಸ್ಥಾತು ಮಜ್ಜಾಯಾಂ ಶುಕ್ಲೇಸ್ಥಾತು ಷಡಾತ್ಮಕಃ | ಏವಂ ಷಡಕ್ಷರಮಯಂ ಶಿವವರ್ಮಾಂತು ಸಂಸ್ಥಿತಂ | ದೇಹಂ ಮಮೇತಿ ಯೋತ್ ಧ್ಯಾಯೇ ಸೋsಹಮೇವ ನ ಸಂಶಯಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.