Index   ವಚನ - 573    Search  
 
ರುಧಿರದಲ್ಲಿ ಆಚಾರಲಿಂಗವಿಹುದು. ಮಾಂಸದಲ್ಲಿ ಗುರುಲಿಂಗವಿಹುದು. ಮೇದಸ್ಸಿನಲ್ಲಿ ಶಿವಲಿಂಗವಿಹುದು. ಅಸ್ಥಿಯಲ್ಲಿ ಚರಲಿಂಗವಿಹುದು. ಮಜ್ಜೆಯಲ್ಲಿ ಪ್ರಸಾದಲಿಂಗವಿಹುದು. ಶುಕ್ಲದಲ್ಲಿ ಮಹಾಲಿಂಗವಿಹುದು ನೋಡಾ. ಇದಕ್ಕೆ ಈಶ್ವರೋsವಾಚ: ಆಚಾರಂ ರುಧಿರಾಂಗೇತು ಮಾಂಸಾಂಗೇ ಗುರುಲಿಂಗಕಂ | ಮೇಧಾಂಗೇ ಶಿವಲಿಂಗಂ ಚ ಅಸ್ಥ್ಯಂಗೇ ಚರಂ ತಥಾ || ಮಜ್ಜೇ ಪ್ರಸಾದಲಿಂಗಂ ಚ ಶುಕ್ಲಾಂಗೇ ಮಹಾಲಿಂಗಕಂ | ಇತಿ ಲಿಂಗಸ್ಥಲಂ ಜ್ಞಾತುಂ ಸುಸೂಕ್ಷ್ಮಂ ಶ್ರುಣು ಪಾರ್ವತೀ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.