Index   ವಚನ - 575    Search  
 
ನಕಾರವೇ ಆಚಾರಲಿಂಗ, ಮಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ, ವಕಾರವೇ ಚರಲಿಂಗ, ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ ನೋಡಾ. ಇದಕ್ಕೆ ಈಶ್ವರೋsವಾಚ: ನಕಾರಮಾಚಾರಲಿಂಗಂ ಮಕಾರಂ ಗುರುಲಿಂಗಕಂ | ಶಿಕಾರಂ ಶಿವಲಿಂಗಂ ಚ ವಕಾರಂ ಚರಲಿಂಗಕಂ || ಯಕಾರಂ ಪ್ರಸಾದಂ ಚೈವ ಓಂಕಾರಂ ಚ ಮಹಸ್ತಥಾ | ಇತಿ ಷಡಕ್ಷರಂ ದೇವೀ ಷಡ್ಲಿಂಗಂ ಚ ನ ಸಂಶಯಃ |'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.