ನಕಾರವೇ ರುಧಿರಮಯವಾಗಿಹುದು.
ಮಕಾರವೇ ಮಾಂಸಮಯವಾಗಿಹುದು.
ಶಿಕಾರವೇ ಮೇದಸ್ಸುಮಯವಾಗಿಹುದು.
ವಕಾರವೇ ಅಸ್ಥಿಮಯವಾಗಿಹುದು.
ಯಕಾರವೇ ಮಜ್ಜೆಮಯವಾಗಿಹುದು.
ಓಂಕಾರವೇ ಶುಕ್ಲಮಯವಾಗಿಹುದು.
ಈ ಷಡಕ್ಷರವೇ ಆಚಾರಾದಿ
ಮಹಾಲಿಂಗಂಗಳಾಗಿಹುದು ನೋಡಾ.
ಇದಕ್ಕೆ ದಿವ್ಯಾಗಮೇ:
ನಕಾರೋ ರುಧಿರೇಸ್ಯಾತ್ತು ಮಕಾರೋ ಮಾಂಸ ಸಂಚಯಃ |
ಶಿಕಾರೋ ಮೇಧಸೀಸ್ಯಾತ್ತು ವಕಾರಸ್ಥಾತುಮಸ್ಥಿಷು ||
ಯಕಾರಸ್ಥಾತು ಮಜ್ಜಾಯಾಂ ಶುಕ್ಲೇಸ್ಥಾತು ಷಡಾತ್ಮಕಃ |
ಏವಂ ಷಡಕ್ಷರಮಯಂ ಶಿವವರ್ಮಾಂತು ಸಂಸ್ಥಿತಂ |
ದೇಹಂ ಮಮೇತಿ ಯೋತ್ ಧ್ಯಾಯೇ ಸೋsಹಮೇವ ನ ಸಂಶಯಃ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nakāravē rudhiramayavāgihudu.
Makāravē mānsamayavāgihudu.
Śikāravē mēdas'sumayavāgihudu.
Vakāravē asthimayavāgihudu.
Yakāravē majjemayavāgihudu.
Ōṅkāravē śuklamayavāgihudu.
Ī ṣaḍakṣaravē ācārādi
mahāliṅgaṅgaḷāgihudu nōḍā.
Idakke divyāgamē:
Nakārō rudhirēsyāttu makārō mānsa san̄cayaḥ |
śikārō mēdhasīsyāttu vakārasthātumasthiṣu ||
yakārasthātu majjāyāṁ śuklēsthātu ṣaḍātmakaḥ |
ēvaṁ ṣaḍakṣaramayaṁ śivavarmāntu sansthitaṁ |
dēhaṁ mamēti yōt dhyāyē sōshamēva na sanśayaḥ ||''
intendudāgi,
apramāṇakūḍalasaṅgamadēvā.