Index   ವಚನ - 588    Search  
 
ಋಗ್ವೇದ ಯಜುರ್ವೇದ ತಾನಿರ್ದಲ್ಲಿ, ಸಾಮದೇವ ಅಥರ್ವಣವೇದ ತಾನಿರ್ದಲ್ಲಿ, ಉದಾತ್ತ ಅನುದಾತ್ತ ಸ್ವರಿತ ಪ್ರಚರವೆಂಬ ಸ್ವರಂಗಳು ಮೊದಲಾಗಿ, ಅನಂತ ವೇದಸ್ವರಂಗಳೆಲ್ಲ ತಾನಿರ್ದಲ್ಲಿ, ಅಜಪೆ ಗಾಯತ್ರಿ ತಾನಿರ್ದಲ್ಲಿ, ಛಂದಸ್ಸು ನಿಘಂಟು ಶಾಸ್ತ್ರಂಗಳೆಲ್ಲ ತಾನಿರ್ದಲ್ಲಿ, ಅಷ್ಟಾದಶಪುರಾಣಂಗಳು ತಾನಿರ್ದಲ್ಲಿ, ಅಷ್ಟವಿಂಶತಿ ದಿವ್ಯಾಗಮಂಗಳು ತಾನಿರ್ದಲ್ಲಿ, ಅನಂತಕೋಟಿ ವೇದಂಗಳು ತಾನಿರ್ದಲ್ಲಿ, ಇವೆಲ್ಲ ತನ್ನಲ್ಲಿ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ತಾರುಂಟು ಹೇಳಾ? ತನ್ನಿಂದಧಿಕವಪ್ಪ ಪರಬ್ರಹ್ಮವಿಲ್ಲವಾಗಿ ತಾನೇ ಸಹಜ ನಿರಾಲಂಬವಾಗಿಹ ಸ್ವಯಂಭುಲಿಂಗ ನೋಡಾ ಅನಂತ ಅಪ್ರಮಾಣಕೂಡಲಸಂಗಮದೇವಾ.