Index   ವಚನ - 594    Search  
 
ನಿವೃತ್ತಿ ಕಲೆ ಪ್ರತಿಷ್ಠಾಕಲೆ ತಾನಿರ್ದಲ್ಲಿ, ವಿದ್ಯಾಕಲೆ ಶಾಂತಿಕಲೆ ತಾನಿರ್ದಲ್ಲಿ, ಶಾಂತ್ಯತೀತಕಲೆ ಶಾಂತ್ಯತೀತೋತ್ತರಕಲೆ ತಾನಿರ್ದಲ್ಲಿ, ಕರ್ಮಸಾದಾಖ್ಯ ಕರ್ತೃಸಾದಾಖ್ಯ ತಾನಿರ್ದಲ್ಲಿ, ಮೂರ್ತಿಸಾದಾಖ್ಯ ಅಮೂರ್ತಿಸಾದಾಖ್ಯ ತಾನಿರ್ದಲ್ಲಿ , ಶಿವಸಾದಾಖ್ಯ ತಾನಿರ್ದಲ್ಲಿ, ಮಹಾಸಾದಾಖ್ಯ ತಾನಿರ್ದಲ್ಲಿ. ಇವೆಲ್ಲಾ ತನ್ನ ಮೂರ್ತಿಯಿಂದಾದುದಲ್ಲದೆ ಮತ್ತೊಂದು ಮೂರ್ತಿಯಿಂದಾದುದಿಲ್ಲ. ತಾನೆ ಶಿವತತ್ವ ತಾನೆ ಪರತತ್ವ ತಾನೆ ಪರಾತ್ಪರತತ್ವ ತನ್ನಿಂದಧಿಕವಪ್ಪ ಘನವೊಂದಿಲ್ಲವಾಗಿ ತಾನೆ ನಿರಾಲಂಬ ನೋಡಾ ಅಪ್ರಮಾಣಕೂಡಲಸಂಗಮದೇವಾ.