ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
ವಿಶುದ್ಧಿ ಆಜ್ಞಾಯೆಂಬ ಷಡುಚಕ್ರದೊಳಗಣ
ದಳ-ವರ್ಣ-ಅಕ್ಷರ-ಅಧಿದೇವತೆ
ಶಕ್ತಿ-ಭಕ್ತಿ-ಸಾದಾಖ್ಯಂಗಳ ದೇವರೆಂಬರು; ಅಲ್ಲಲ್ಲ ನೋಡಾ.
ವಾಙ್ಮನಕ್ಕಗೋಚರವಾಗಿಹ ಪರಶಿವತತ್ವವ ತಾನೆಂದರಿದಡೆ
ತಾನೆ ದೇವ ನೋಡಾ
ಅಪ್ರಮಾಣಕೂಡಲಸಂಗಮದೇವ.
Art
Manuscript
Music
Courtesy:
Transliteration
Ādhāra svādhiṣṭhāna maṇipūraka anāhata
viśud'dhi ājñāyemba ṣaḍucakradoḷagaṇa
daḷa-varṇa-akṣara-adhidēvate
śakti-bhakti-sādākhyaṅgaḷa dēvarembaru; allalla nōḍā.
Vāṅmanakkagōcaravāgiha paraśivatatvava tānendaridaḍe
tāne dēva nōḍā
apramāṇakūḍalasaṅgamadēva