ತಾನೆ ಚಿನ್ನಾದ, ತಾನೆ ಚಿದ್ಬಿಂದು, ತಾನೆ ಚಿತ್ಕಲೆ
ತಾನೆ ಚಿತ್ಕಲಾತೀತ ನೋಡಾ.
ತನ್ನಿಂದಧಿಕವಾದ ದೇವರಿಲ್ಲವಾಗಿ
ತಾನೆ ಚಿದಾನಂದಸ್ವರೂಪವಾಗಿಹ ಚಿಲ್ಲಿಂಗ ನೋಡಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tāne cinnāda, tāne cidbindu, tāne citkale
tāne citkalātīta nōḍā.
Tannindadhikavāda dēvarillavāgi
tāne cidānandasvarūpavāgiha cilliṅga nōḍā,
apramāṇakūḍalasaṅgamadēvā