ಆ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ.
ಆದಿ ಅಕಾರಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ.
ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ.
ಆ ಆದಿ ಕಲೆ ನಾದ ಬಿಂದುಪ್ರಣವಕ್ಕೆ
ಆದಿ ಪ್ರಕೃತಿಪ್ರಣವವೇ ಆಧಾರ.
ಆ ಆದಿಪ್ರಕೃತಿಪ್ರಣವಕ್ಕೆ ಪ್ರಾಣಮಾತ್ರೆಯಪ್ರಣವವೇ ಆಧಾರ.
ಆ ಪ್ರಾಣಮಾತ್ರೆಯಪ್ರಣವಕ್ಕೆ ಅಖಂಡಜ್ಯೋತಿರ್ಮಯವಾಗಿಹ
ಲಿಂಗವೇ ಆಧಾರ.
`ಮ' ಎಂದಡೆ ಆದಿ ಅನುಸ್ವಾರಪ್ರಣವ,
`ಅ' ಎಂದಡೆ ಆದಿ ನಾದ ಪ್ರಣವ,
`ಉ' ಎಂಬ ಆದಿಬಿಂದುಪ್ರಣವದಲ್ಲಿ ಬಂದು ಕೂಡಿ
'ಮ' ಯೆಂಬ ಅನುಸ್ವಾರಪ್ರಣವದಲ್ಲಿ ಬಂದು ಕೂಡಲು
ಮಹದೋಂಕಾರವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.