ಇನ್ನು ಆ ಅಖಂಡಮಹಾಜ್ಯೋತಿಪ್ರಣವದ
ತಾರಕಸ್ವರೂಪವೇ ಮೂರ್ತಿಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ
ದಂಡಸ್ವರೂಪವೆ ಪಿಂಡಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ
ಕುಂಡಲಾಕಾರವೆ ಕಲಾಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ
ಅರ್ಧಚಂದ್ರಾಕಾರವೆ ಬ್ರಹ್ಮಾನಂದ ಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ
ದರ್ಪಣಾಕಾರವೆ ವಿಜ್ಞಾನಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ
ಜ್ಯೋತಿಸ್ವರೂಪವೆ ಪರಬ್ರಹ್ಮವು.
ಈ ಆರು ಷಟ್ಸ್ಥಲಬ್ರಹ್ಮ ನೋಡಾ.
ಇದಕ್ಕೆ ನಿರಂಜನಾತೀತಾಗಮೇ:
ಓಂಕಾರ ತಾರಕಂ ರೂಪಂ ಮೂರ್ತಿಬ್ರಹ್ಮ ಯಥಾ ಭವೇತ್ |
ಓಂಕಾರ ದಂಡರೂಪೇ ಚ ಪಿಂಡಬ್ರಹ್ಮೇತಿ ಕಥ್ಯತೇ ||
ಓಂಕಾರ ಕುಂಡಲಾಕಾರಂ ಕಲಾಬ್ರಹ್ಮೇತಿ ಕೀರ್ತಿತಂ |
ಓಂಕಾರಂ ಅರ್ಧಚಂದ್ರಂ ಚ ಬ್ರಹ್ಮಾನಂದಂ ತಥಾ ಭವೇತ್ ||
ಓಂಕಾರಂ ದರ್ಪಣಾಕಾರಂ ವಿಜ್ಞಾನಬ್ರಹ್ಮ ಉಚ್ಯತೇ |
ಓಂಕಾರಂ ಜ್ಯೋತಿರೂಪಂ ಚ ಪರಬ್ರಹ್ಮ ಯಥಾ ಭವೇತ್ ||
ಪ್ರಣವಂ ಷಡ್ವಿಧಂ ಚೈವ ಷಟ್ಸ್ಥಲಬ್ರಹ್ಮ ಉಚ್ಯತೇ |
ಇತಿ ಷಟ್ಬ್ರಹ್ಮ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ā akhaṇḍamahājyōtipraṇavada
tārakasvarūpavē mūrtibrahmavu.
Ā akhaṇḍamahājyōtipraṇavada
daṇḍasvarūpave piṇḍabrahmavu.
Ā akhaṇḍamahājyōtipraṇavada
kuṇḍalākārave kalābrahmavu.
Ā akhaṇḍamahājyōtipraṇavada
ardhacandrākārave brahmānanda brahmavu.
Ā akhaṇḍamahājyōtipraṇavada
darpaṇākārave vijñānabrahmavu.
Ā akhaṇḍamahājyōtipraṇavada
Jyōtisvarūpave parabrahmavu.
Ī āru ṣaṭsthalabrahma nōḍā.
Idakke niran̄janātītāgamē:
Ōṅkāra tārakaṁ rūpaṁ mūrtibrahma yathā bhavēt |
ōṅkāra daṇḍarūpē ca piṇḍabrahmēti kathyatē ||
ōṅkāra kuṇḍalākāraṁ kalābrahmēti kīrtitaṁ |
ōṅkāraṁ ardhacandraṁ ca brahmānandaṁ tathā bhavēt ||
ōṅkāraṁ darpaṇākāraṁ vijñānabrahma ucyatē |
ōṅkāraṁ jyōtirūpaṁ ca parabrahma yathā bhavēt ||
praṇavaṁ ṣaḍvidhaṁ caiva ṣaṭsthalabrahma ucyatē |
iti ṣaṭbrahma vijñēyaṁ ētadgōpyaṁ varānanē ||''
intendudāgi, apramāṇakūḍalasaṅgamadēvā.