ಇನ್ನು ಷಟ್ಸ್ಥಲಬ್ರಹ್ಮವಾಗಿಹ
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ
ಮೂರ್ತಿಬ್ರಹ್ಮವು ಅನಂತಕೋಟಿ ಮಹಾಜ್ಯೋತಿಪ್ರಕಾಶವಾಗಿಹುದು.
ಆ ಅಖಂಡಮಹಾಜ್ಯೋತಿಪ್ರಣವದ ದಂಡಕಸ್ವರೂಪವಾಗಿಹ
ಪಿಂಡಬ್ರಹ್ಮವು ಅನಂತಕೋಟಿ ಮಹಾಜ್ಯೋತಿಪ್ರಕಾಶವಾಗಿಹುದು.
ಆ ಅಖಂಡಮಹಾಜ್ಯೋತಿಪ್ರಣವದ ಕುಂಡಲಾಕಾರವಾಗಿಹ
ಕಲಾಬ್ರಹ್ಮವು ಅನಂತಕೋಟಿ ಅತಿಮಹಾಜ್ಯೋತಿಪ್ರಕಾಶವಾಗಿಹುದು.
ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಸ್ವರೂಪವಾಗಿಹ
ಬ್ರಹ್ಮಾನಂದಬ್ರಹ್ಮವು ಅನಂತಕೋಟಿ
ಅತಿಮಹಾಜ್ಯೋತಿ ಪ್ರಕಾಶವಾಗಿಹುದು.
ಆ ಅಖಂಡಮಹಾಜ್ಯೋತಿಪ್ರಣವದ
ದರ್ಪಣಾಕಾರವಾಗಿಹ ವಿಜ್ಞಾನಬ್ರಹ್ಮವು
ಅನಂತಕೋಟಿ ಅತಿ ಮಹಾತೀತೋತ್ತರಜ್ಯೋತಿಪ್ರಕಾಶವಾಗಿಹುದು.
ಆ ಅಖಂಡಮಹಾಜ್ಯೋತಿಸ್ವರೂಪವಾಗಿಹ ಪರಬ್ರಹ್ಮವು
ಅನಂತಕೋಟಿ ಅತಿಮಹಾತೀತೋತ್ತರಕ್ಕೂ ಅತೀತವಾಗಿಹ
ಅಖಂಡಮಹಾಜ್ಯೋತಿಪ್ರಕಾಶವಾಗಿಹುದು ನೋಡಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaṭsthalabrahmavāgiha
ā akhaṇḍamahājyōtipraṇavada tārakasvarūpavāgiha
mūrtibrahmavu anantakōṭi mahājyōtiprakāśavāgihudu.
Ā akhaṇḍamahājyōtipraṇavada daṇḍakasvarūpavāgiha
piṇḍabrahmavu anantakōṭi mahājyōtiprakāśavāgihudu.
Ā akhaṇḍamahājyōtipraṇavada kuṇḍalākāravāgiha
kalābrahmavu anantakōṭi atimahājyōtiprakāśavāgihudu.
Ā akhaṇḍamahājyōtipraṇavada ardhacandrasvarūpavāgiha
Brahmānandabrahmavu anantakōṭi
atimahājyōti prakāśavāgihudu.
Ā akhaṇḍamahājyōtipraṇavada
darpaṇākāravāgiha vijñānabrahmavu
anantakōṭi ati mahātītōttarajyōtiprakāśavāgihudu.
Ā akhaṇḍamahājyōtisvarūpavāgiha parabrahmavu
anantakōṭi atimahātītōttarakkū atītavāgiha
akhaṇḍamahājyōtiprakāśavāgihudu nōḍā,
apramāṇakūḍalasaṅgamadēvā.