ಆ ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವಾಗಿಹ
ಪರಬ್ರಹ್ಮದಲ್ಲಿ ಶಿವನುತ್ಪತ್ಯವಾದನು,
ಕ್ಷೇತ್ರಜ್ಞನುತ್ಪತ್ಯವಾದನು, ಕರ್ತೃ ಉತ್ಪತ್ಯವಾದನು,
ಭಾವವುತ್ಪತ್ಯವಾಯಿತ್ತು, ಚೈತನ್ಯನುತ್ಪತ್ಯವಾದನು,
ಆಕಾಶವುತ್ಪತ್ಯವಾಯಿತ್ತು.
ಈ ಆರು ತತ್ವಂಗಳು ಪರಬ್ರಹ್ಮದಲ್ಲಿ ಹುಟ್ಟಿತ್ತು ನೋಡಾ.
ಇದಕ್ಕೆ ನಿರಂಜನಾಗಮೇ:
ಶಿವಂ ಕ್ಷೇತ್ರಜ್ಞಕರ್ತಾರಂ ಭಾವಂ ಚೈತನ್ಯಮಂತರಂ |
ಏವಂತು ಷಡ್ವಿಧಂ ಪ್ರೋಕ್ತಂ ಪರಬ್ರಹ್ಮ ಚ ಕಥ್ಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā akhaṇḍamahājyōtipraṇavada jyōtisvarūpavāgiha
parabrahmadalli śivanutpatyavādanu,
kṣētrajñanutpatyavādanu, kartr̥ utpatyavādanu,
bhāvavutpatyavāyittu, caitan'yanutpatyavādanu,
ākāśavutpatyavāyittu.
Ī āru tatvaṅgaḷu parabrahmadalli huṭṭittu nōḍā.
Idakke niran̄janāgamē:
Śivaṁ kṣētrajñakartāraṁ bhāvaṁ caitan'yamantaraṁ |
ēvantu ṣaḍvidhaṁ prōktaṁ parabrahma ca kathyatē ||''
intendudāgi, apramāṇakūḍalasaṅgamadēvā.