Index   ವಚನ - 624    Search  
 
ಗಂಧ ರಸ ರೂಪ ಸ್ಪರ್ಶ ಶಬ್ದ ಕರ್ತರು ಈ ಆರು ಯೋಗಾಂಗವು ಆದಿಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಗಂಧಂ ಚ ರಸರೂಪಂ ಚ ಸ್ಪರ್ಶನಂ ಶಬ್ದಮೇವ ಹಿ | ಕರ್ತಾರಂ ಚೇತಿ ಯೋಗಾಂಗಂ ಆದಿಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.