ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಚೇತನ
ಈ ಆರು ವಿದ್ಯಾಂಗವು
ಜ್ಞಾನಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಘ್ರಾಣಂ ಜಿಹ್ವಾ ಚ ನೇತ್ರಂ ಚ ತ್ವಕ್ ಶ್ರೋತ್ರಂ ಚೇತನಂ ವಿದುಃ |
ಷಟ್ಕಂ ವಿದ್ಯಾಂಗಮೇವೇತಿ ಜ್ಞಾನಶಕ್ತಿಸ್ತು ಕಾರಣಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ghrāṇa jihve nētra tvakku śrōtra cētana
ī āru vidyāṅgavu
jñānaśaktiyē kāraṇavāgi huṭṭittu nōḍā.
Idakke mahāvātulāgamē:
Ghrāṇaṁ jihvā ca nētraṁ ca tvak śrōtraṁ cētanaṁ viduḥ |
ṣaṭkaṁ vidyāṅgamēvēti jñānaśaktistu kāraṇaṁ ||''
intendudāgi, apramāṇakūḍalasaṅgamadēvā