ಜಗತ್ ಸೃಷ್ಟ್ಯಾಯರ್ಥಕಾರಣವಾಗಿ
ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ದೆಸೆಯಿಂದ
ಷಟ್‍ಶಕ್ತಿಗಳುತ್ಪತ್ಯವಾದವು.
ಆ ಷಟ್‍ಶಕ್ತಿಯೇ ಕಾರಣವಾಗಿ ಷಡಂಗಗಳು ಉತ್ಪತ್ಯವಾದವು.
ಆ ಷಡಂಗದಲ್ಲಿ ಲೋಕಾದಿಲೋಕ ಸಚರಾಚರಂಗಳ
ಉತ್ಪತ್ಯ ಲಯವುನೋಡಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Jagat sr̥ṣṭyāyarthakāraṇavāgi
niḥśabdavemba parabrahmada cintāśaktiya deseyinda
ṣaṭśaktigaḷutpatyavādavu.
Ā ṣaṭśaktiyē kāraṇavāgi ṣaḍaṅgagaḷu utpatyavādavu.
Ā ṣaḍaṅgadalli lōkādilōka sacarācaraṅgaḷa
utpatya layavunōḍā,
apramāṇakūḍalasaṅgamadēvā