Index   ವಚನ - 630    Search  
 
ಆ ಶಿವತತ್ವದ ಪೃಥ್ವಿಯ ಮೇಲೆ ನಿರಾಳ ಆಧಾರಚಕ್ರ. ಅಲ್ಲಿಯ ಪದ್ಮ ಐನೂರುನಾಲ್ವತ್ತುದಳದ ಪದ್ಮ, ಆ ಪದ್ಮಕ್ಕೆ ವರ್ಣವಿಲ್ಲ. ಅಲ್ಲಿಯ ಅಕ್ಷರ ಐನೂರು ನಾಲ್ವತ್ತಕ್ಷರ; ಆ ಅಕ್ಷರಕ್ಕೆ ರೂಪಿಲ್ಲ. ಅಲ್ಲಿಯ ಶಕ್ತಿ ನಿರಾಳರುದ್ರಶಕ್ತಿ; ನಿರಾಳಬ್ರಹ್ಮವೆ ಅಧಿದೇವತೆ. ಅಲ್ಲಿಯ ನಾದ ಅಕಾರನಾದ. ಅಲ್ಲಿಯ ಬೀಜಾಕ್ಷರ ಅಕಾರ ನೋಡಾ, ಅಪ್ರಮಾಣಕೂಡಲಸಂಗಮದೇವಾ.