Index   ವಚನ - 631    Search  
 
ಶಿವತತ್ತ್ವದ ಅಪ್ಪುವಿನ ಮೇಲೆ ನಿರಾಳ ಸ್ವಾಧಿಷ್ಠಾನಚಕ್ರ, ಅಲ್ಲಿಯ ಪದ್ಮ ನಾನೂರು ಐವತ್ತು ದಳದ ಪದ್ಮ; ಆ ಪದ್ಮವು ಉಪಮೆ ಇಲ್ಲದ ವರ್ಣ. ಅಲ್ಲಿಯ ಅಕ್ಷರ ನಾನೂರ ಐವತ್ತಕ್ಷರ; ಆ ಅಕ್ಷರ ನಿರಾಕಾರವಾಗಿಹುದು. ಅಲ್ಲಿಯ ಶಕ್ತಿ ನಿರಾಳ ಈಶ್ವರಶಕ್ತಿ. ನಿತ್ಯಾನಂದಬ್ರಹ್ಮವೆ ಅಧಿದೇವತೆ. ಅಲ್ಲಿಯ ನಾದ ಪ್ರಣವನಾದ. ಅಲ್ಲಿಯ ಬೀಜಾಕ್ಷರ ಉಕಾರ ನೋಡಾ ಅಪ್ರಮಾಣಕೂಡಲಸಂಗಮದೇವಾ.