ಶಿವತತ್ವದ ತೇಜದ ಮೇಲೆ ನಿರಾಳ ಮಣಿಪೂರ ಚಕ್ರ.
ಅಲ್ಲಿಯ ಪದ್ಮ ಮುನ್ನೂರರುವತ್ತು ದಳದ ಪದ್ಮ;
ಆ ಪದ್ಮದ ವರ್ಣ ಉಪಮಾತೀತವು.
ಅಲ್ಲಿಯ ಅಕ್ಷರ ಮುನ್ನೂರರುವತ್ತಕ್ಷರ;
ಆ ಅಕ್ಷರ ರೂಪಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಳಶಿವಶಕ್ತಿ.
ನಿರಂಜನಬ್ರಹ್ಮವೇ ಅಧಿದೇವತೆ.
ಅಲ್ಲಿಯ ನಾದ ಬ್ರಹ್ಮನಾದ.
ಅಲ್ಲಿಯ ಬೀಜಾಕ್ಷರ ಮಕಾರ ನೋಡಾ
ಅಪ್ರಮಾಣಕೂಡಲಸಂಗಮದೇವಾ.