Index   ವಚನ - 633    Search  
 
ಶಿವತತ್ವದ ವಾಯುವಿನ ಮೇಲೆ ನಿರಾಳ ಅನಾಹತಚಕ್ರ. ಅಲ್ಲಿಯ ಪದ್ಮ ಇನ್ನೂರಾ ಎಪ್ಪತ್ತು ದಳದ ಪದ್ಮ. ಆ ಪದ್ಮ ವರ್ಣವಿಲ್ಲದೆ ಅಪ್ರಮಾಣ ಅಗೋಚರವಾಗಿಹುದು. ಅಲ್ಲಿಯ ಅಕ್ಷರ ಇನ್ನೂರಾ ಎಪ್ಪತ್ತಕ್ಷರ; ಆ ಅಕ್ಷರ ನಿರೂಪಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಳ ಉಪಮಾಶಕ್ತಿ. ಅಮಲಾನಂದಬ್ರಹ್ಮವೇ ಅಧಿದೇವತೆ. ಅಲ್ಲಿಯ ನಾದ ಸುನಾದ. ಅಲ್ಲಿಯ ಬೀಜಾಕ್ಷರ ಆದಿಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.