ನಿರಾಮಯ ಮಹೇಶ್ವರಂಗೆ ನಿರಾಮಯವೆ ಅಂಗ,
ನಿರಾಮಯವೆ ಹಸ್ತ, ನಿರಾಮಯವೆ ಗುರುಲಿಂಗ,
ನಿರಾಮಯವೆಂಬ ಮುಖದಲ್ಲಿ
ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ,
ತೃಪ್ತಿಯ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nirāmaya mahēśvaraṅge nirāmayave aṅga,
nirāmayave hasta, nirāmayave guruliṅga,
nirāmayavemba mukhadalli
nirāmayānandavemba sukhava samarpaṇava māḍi,
tr̥ptiya bhōgisuvanu nōḍā
apramāṇakūḍalasaṅgamadēvā.