ನಿರಾಮಯ ಶರಣಂಗೆ ನಿರಾಮಯವೆ ಅಂಗ,
ನಿರಾಮಯವೆ ಹಸ್ತ, ನಿರಾಮಯವೆ ಪ್ರಸಾದಲಿಂಗ,
ನಿರಾಮಯವೆಂಬ ಮುಖದಲ್ಲಿ,
ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nirāmaya śaraṇaṅge nirāmayave aṅga,
nirāmayave hasta, nirāmayave prasādaliṅga,
nirāmayavemba mukhadalli,
nirāmayānandavemba sukhava samarpaṇava māḍi,
tr̥ptiyane bhōgisuvanu nōḍā
apramāṇakūḍalasaṅgamadēvā.