Index   ವಚನ - 652    Search  
 
ಇನ್ನು ನಿರಂಜನ ಷಡುಚಕ್ರಂಗಳ ಮೇಲೆ ನಾಲ್ಕು ಚಕ್ರಂಗಳುಂಟು. ಅದೆಂತೆಂದಡೆ: ರಹಸ್ಯಕ್ಕೂ ಅತ್ಯಂತ ರಹಸ್ಯವಾಗಿಹುದು. ಸೂಕ್ಷ್ಮಕ್ಕೂ ಅತ್ಯಂತ ಸೂಕ್ಷ್ಮವಾಗಿಹುದು. ಶೂನ್ಯಕ್ಕೂ ಅತ್ಯಂತ ಶೂನ್ಯವಾಗಿಹುದು. ಉಪಮೆಗೂ ಉಪಮಾತೀತವಾಗಿಹುದುಯೆಂದು ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.