Index   ವಚನ - 654    Search  
 
ನಿರಂಜನಾತೀತ ಭಕ್ತ, ನಿರಂಜನಾತೀತ ಮಹೇಶ್ವರ, ನಿರಂಜನಾತೀತ ಪ್ರಸಾದಿ, ನಿರಂಜನಾತೀತ ಪ್ರಾಣಲಿಂಗಿ, ನಿರಂಜನಾತೀತ ಶರಣ, ನಿರಂಜನಾತೀತ ಐಕ್ಯ. ಈ ನಿರಂಜನಾತೀತ ಷಡುಸ್ಥಲಬ್ರಹ್ಮವು ಅಖಂಡಿತ ಅಪ್ರಮಾಣ ಅಗೋಚರ ಅಪ್ರಮೇಯ ಅಗಮ್ಯ ವಾಚಾತೀತಮಗೋಚರಕತ್ತತ್ತವಾಗಿಹುದು ನಿರಂಜನಾತೀತ ಷಡುಸ್ಥಲಬ್ರಹ್ಮ ನೋಡಾ ಅಪ್ರಮಾಣಕೂಡಲಸಂಗಮದೇವಾ.